District News

ಆಹಾರ ದಸರಾ ಶೇಂಗಾ, ಕೊಬ್ಬರಿ ಖಾದ್ಯ ಸ್ಪರ್ಧೆಯಲ್ಲಿ 12 ಜೋಡಿಗಳು ಭಾಗಿ

Share Below Link

ಶಿವಮೊಗ್ಗ: ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ದಸರಾ 2026ರ ಅಂಗವಾಗಿ ಆಹಾರ ದಸರಾ ಪ್ರಯುಕ್ತ ಶೇಂಗಾ ಮತ್ತು ಕೊಬ್ಬರಿಯನ್ನು ಉಪಯೋಗಿಸಿ ಅರ್ಧ ಗಂಟೆ ಒಳಗೆ ಮಾಡುವ ವಿವಿಧ ಖಾದ್ಯಗಳ ಸ್ಪರ್ಧೆ ನಡೆಯಿತು, ಸುಮಾರು 12 ಜೋಡಿಗಳು ವಿವಿಧ ಬಗೆಯ ಖಾದ್ಯಗಳನ್ನು ರಚಿಸಿದರು ಅಣ್ಣ ತಂಗಿ,ಅಕ್ಕ ತಮ್ಮ. ಮತ್ತು ಅಕ್ಕ ತಂಗಿ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಕಾರ್ಯಕ್ರಮವನ್ನು ಜಿಲ್ಲಾ ಆಹಾರ ಸರ್ವೇಕ್ಷಣ ಅಧಿಕಾರಿ ನಾಗರಾಜ್ ಉದ್ಘಾಟಿಸಿದರು ಶಾಸಕರಾದ ಚನ್ನಬಸಪ್ಪ ಮಾಜಿ ಕಾರ್ಪೊರೇಟರ್ ಜ್ಞಾನೇಶ್ವರ್ ಮತ್ತು ಆಹಾರ ದಸರಾದ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ತೀರ್ಪುಗಾರರಾಗಿ ಮಾಜಿ ಕಾರ್ಪೊರೇಟರ್ ಅನಿತಾ ರವಿಶಂಕರ್, ಬಿ ಎಚ್ ಈ ಓ ಸುಶೀಲಾ ಬಾಯಿ ಭಾಗವಹಿಸಿದ್ದರು ಮೊದಲ ಬಹುಮಾನ ಹತ್ತು ಸಾವಿರ ರೂಗಳ ಗ್ರೈಂಡರ್ ಎರಡನೇ ಬಹುಮಾನ 5000 ಸ್ಟ್ಯಾಂಡಿಂಗ್ ಫ್ಯಾನ್ ಮೂರನೇ ಬಹುಮಾನ 3000 ಮಿಕ್ಸರ್ ಹಾಗೂ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

Leave a Reply

Your email address will not be published. Required fields are marked *