District NewsLatest News

ನಗರದ ಇತಿಹಾಸ ಸಾರುವ ವಿಶೇಷ ಲೇಸರ್ ಶೋಗೆ ಶಾಸಕ ಚೆನ್ನಿ ಚಾಲನೆ

Share Below Link

ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ಹೆಗ್ಗುರುತಾದ ‘ಶಿವಮೊಗ್ಗ ನಾಡಹಬ್ಬ ದಸರಾ 2026’ ಮಹೋತ್ಸವದ ಅಂಗವಾಗಿ, ಶಿವಮೊಗ್ಗ ನಗರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಗರದ ಇತಿಹಾಸವನ್ನು ಸಾರುವ ವಿಶೇಷ ಲೇಸರ್ ಶೋ ಪ್ರರ‍್ಶನಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಮಹಾನಗರ ಪಾಲಿಕೆ ಆವರಣದಲ್ಲಿ ನಿನ್ನೆ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು, “ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಧುನಿಕ ತಂತ್ರಜ್ಞಾನದ ಮೆರುಗು ನೀಡುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಈ ವಿಶೇಷ ಲೇಸರ್ ಶೋ ಆಯೋಜಿಸಲಾಗಿದೆ. ನಮ್ಮ ಶಿವಮೊಗ್ಗದ ಐತಿಹಾಸಿಕ ಹಿನ್ನೆಲೆ, ಕೆಳದಿ ಸಂಸ್ಥಾನದ ಗತವೈಭವ ಹಾಗೂ ಮಲೆನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ಆರ‍್ಷಕವಾಗಿ ಪರಿಚಯಿಸಲು ಇಂತಹ ಬೆಳಕು ಮತ್ತು ಧ್ವನಿಯ ಪ್ರರ‍್ಶನಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಸರ‍್ವಜನಿಕರು ಹಾಗೂ ವಿದ್ಯರ‍್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆಯಬೇಕು,” ಎಂದು ತಿಳಿಸಿದರು.

Leave a Reply

Your email address will not be published. Required fields are marked *