District News

ಸೊರಬ: ಸೌಹಾರ್ದದ ಸಂದೇಶ ಸಾರಿದ ಸಾರ್ವಜನಿಕ ದಸರಾ ಉತ್ಸವಕ್ಕೆ 18ರ ಸಂಭ್ರಮ

Share Below Link

ಸೊರಬ,ಅ.೧೨: ಹಿಂದೂ ಧರ್ಮದಲ್ಲಿ ಆಶ್ವಿಜ ಮಾಸಕ್ಕೆ ಪವಿತ್ರ ಸ್ಥಾನವಿದ್ದು, ದೇವಿ ಆರಾಧನೆಗೆ ಪ್ರಶಕ್ತ ಮತ್ತು ಶ್ರೇಷ್ಠಕಾಲವೆಂದು ಪರಿಗಣಿಸಲಾಗುತ್ತದೆ ಎಂದು ಶ್ರೀ ರಂಗನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ನಾರಾಯಣ ಭಟ್ ಮರಾಠೆ ಹೇಳಿದರು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಸೋಮವಾರ ಹಮ್ಮಿಕೊಂಡ 18ನೇ ವರ್ಷದ ಸಾರ್ವಜನಿಕ ದಸರಾ ಉತ್ಸವ ಕಾರ್ಯಕ್ರಮದಲ್ಲಿ ದಸರಾ ಉತ್ಸವ ಸಾಧಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ವೈವಿದ್ಯತೆಯಿಂದ ಕೂಡಿರುವ ದೇಶದಲ್ಲಿ ವರ್ಷದಲ್ಲಿ ನಿತ್ಯವೂ ದೇವರ ಆರಾಧನೆಗಳು ನಡೆಯುತ್ತಲೇ ಇರುತ್ತವೆ. ಒಂದೊಂದು ದಿನವೂ ಒಂದೊಂದು ದೇವರಿಗೆ ಮೀಸಲಾಗಿರಿಸಿ ಪೂಜಿಸಲಾಗುತ್ತದೆ. ಶರನ್ನವರಾತ್ರಿಯನ್ನು ಅತ್ಯಂತ ವೈಭವದಿಂದ ದೇಶದಲ್ಲಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ದಸರಾವನ್ನು ದಶಹರ ಎಂದು ಕರೆಯಲಾಗುತ್ತದೆ. ರಾವಣನನ್ನು ಸಂಹರಿಸಿದ ದಿನವನ್ನು ದಸರಾ ಅಥವಾ ವಿಜಯ ದಶಮಿ ಎಂದು ಆಚರಿಸುವ ಪದ್ಧತಿ ಇದೆ. ಪಟ್ಟಣದಲ್ಲಿ ಕಳೆದ 18 ವರ್ಷದಿಂದ ಸರ್ವ ಸಮುದಾಯದವರು ಒಗ್ಗೂಡಿ ಸಾರ್ವಜನಿಕ ದಸರಾ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ರಂಗನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ನಾರಾಯಣ ಭಟ್ ಮರಾಠೆ ಹಾಗೂ ಸರಿಗಮಪ ಗಾಯಕಿ ಕೀರ್ತಿ ಅವರಿಗೆ ದಸರಾ ಉತ್ಸವ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ರಂಗನಾಥ ವಿವಿದೋದ್ಧೇಶ ಸಹಕಾರ ಸಂಘದ ನಿರ್ದೇಶಕ ಗಿರೀಶ್ ಎಲ್. ಶೇಟ್, ಸಮಾಜ ಸೇವಕ ಮಂಜುನಾಥ ತುರುವೆಕೆರೆ, ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ವಿಕ್ರಂ ಮೇಸ್ತಿç ಅವರಿಗೆ ಗೌರವಿಸಲಾಯಿತು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ್ ಮೇಸ್ತಿç ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಎನ್. ಷಣ್ಮುಖಾಚಾರ್, ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಮಹಿಳಾ ಅಧ್ಯಕ್ಷೆ ಸುಜಾತಾ ಜೋತಾಡಿ, ರೂಪಾ ಮಧುಕೇಶ್ವರ್, ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ನಿಜಗುಣ, ನಡಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಾಂಡು ಕೊಡಕಣಿ, ಯು. ಫಯಾಜ್ ಆಹ್ಮದ್, ಬಸವರಾಜ ಗುರ್ಕಿ, ಮಾಲತೇಶ್ ಮಾಸ್ತರ್ ಸೇರಿದಂತೆ ಇತರರಿದ್ದರು. ಮಮತಾ ಲಿಂಗರಾಜ್ ಪ್ರಾರ್ಥಿಸಿದರು. ಮಹೇಶ್ ಖಾರ್ವಿ ಸ್ವಾಗತಿಸಿ, ಸಂತೋಷ್ ಸೊಪ್ಪಿನ ಕೇರಿ ವಂದಿಸಿ, ಜಿ. ಕೆರಿಯಪ್ಪ ನಿರೂಪಿಸಿದರು.

Leave a Reply

Your email address will not be published. Required fields are marked *