District NewsLatest News

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ಜೀವ ಬೆದರಿಕೆ ಕರೆ: ಎಸ್ಪಿಗೆ ದೂರು

Share Below Link

ಶಿವಮೊಗ್ಗ: ತಮಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆ ಬಂದಿದ್ದು, ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟçಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರು ಸೋಮವಾರ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ತಮ್ಮ ಅಧಿಕೃತ ಮೊಬೈಲ್ ಸಂಖ್ಯೆ 9880030004 ಗೆ ದಿ. 17-10-2026 ರಂದು ಇಬ್ಬರು ಮುಸಲ್ಮಾನ್ ವ್ಯಕ್ತಿಗಳಿಂದ ಕರೆ ಬಂದಿದ್ದು, 7019994981 ಸಂಖ್ಯೆಯಿAದ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ. ರಿಜ್ವಾನ್ ಬೇಗ್ ಎಂಬಾತ 9823658527 ಸಂಖ್ಯೆಯಿAದ ರಾತ್ರಿ 8:49 ಮತ್ತು 10:49ಕ್ಕೆ ಕರೆ ಮಾಡಿದ್ದಾನೆ. ಖಿಖಂI ತಂತ್ರಾAಶದಿAದ ಈ ಮಾಹಿತಿ ತಿಳಿದು ಬಂದಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡು ತಮಗೆ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

ಮೊದಲ ಕರೆಯಲ್ಲಿ ರಿಜ್ವಾನ್ ಬೇಗ್ ಎಂಬಾತ ಕರೆ ಮಾಡಿದಾಗ ನಾನು ಕುಟುಂಬದ ಜೊತೆಗೆ ಚಿತ್ರಮಂದಿರದಲ್ಲಿದ್ದೆ. ಆತ ನೀವು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಲ್ಲವೇ ಎಂದು ಪ್ರಶ್ನಿಸಿದ. ಆನಂತರ ಏನೇನೋ ಮಾತನಾಡಲು ಆರಂಭಿಸಿದ. ಆತನ ಮಾತು ಸ್ಪಷ್ಟವಾಗಿ ಕೇಳಿಸಲಿಲ್ಲ. ಆಗ ನಾನು ಸರಿಯಾಗಿ ಮಾತನಾಡುವುದಿದ್ದರೆ ಮಾತನಾಡು, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದಾಗ, ದೂರು ಕೊಡಿ ಎಂದು ಹೇಳಿ ಕರೆ ಕಟ್ ಮಾಡಿದ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರಾಷ್ಟçಭಕ್ತ ಬಳಗದ ಪ್ರಮುಖರಾದ ಕೆ.ಈ.ಕಾಂತೇಶ್, ಮೋಹನ್ ಜಾಧವ್, ಲಕ್ಷಿö್ಮÃ ಶಂಕರ್ ನಾಯ್ಕ್, ಬಾಲು, ಶಂಕರ್‌ನಾಯ್ಕ, ಅನಿತಾ, ಶಿವಾಜಿ, ವಿಜಯ್‌ಕುಮಾರ್ , ಸಂತೋಷ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *