ಶಿವಮೊಗ್ಗ ದಸರೆಗೆ ಗಜಪಡೆಯ ಭವ್ಯ ಆಗಮನ: ಅಂಬಾರಿ ಆನೆಗಳಿಗೆ ವಿಶೇಷ ಪೂಜೆ, ಅದ್ಧೂರಿ ಸ್ವಾಗತ!
ಶಿವಮೊಗ್ಗ ದಸರಾದಲ್ಲಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರಲು ಸಕ್ರೆ ಬೈಲು ಆನೆ ಬಿಡಾರದಿಂದ ನಿನ್ನೆ ಸಂಜೆ ನಗರಕ್ಕೆ ಆಗಮಿಸಿದ ಆನೆಗಳಿಗೆ ಭವ್ಯ ಸ್ವಾಗತ ನೀಡಲಾಯಿತು. ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ವಾಸವಿ ಶಾಲಾ ಆವರಣದಲ್ಲಿ ಆನೆಗಳಾದ ಸಾಗರ್ ಬಹದ್ದೂರ್ ಮತ್ತು ಸೋಮಣ್ಣ ಈ ಮೂರು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶಾಸಕ ಎನ್ ಚನ್ನಬಸಪ್ಪ ಮಾಜಿ ಕಾರ್ಪೊರೇಟರ್ಗಳಾದ ಜ್ಞಾನೇಶ್ವರ್ ಪ್ರಭಾಕರ್ ಅನಿತಾ ರವಿಶಂಕರ್ ಹಾಗೂ ಪಾಲಿಕೆಯ ಅಧಿಕಾರಿಗಳು ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

