ಡಿ.29: ಸಿಟಿ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕರ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ
ಶಿವಮೊಗ್ಗ (ಶಿವಮೊಗ್ಗ ನ್ಯೂಸ್ ವರದಿ): ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್‍ನ ನಿರ್ದೇಶ ಕರ ಚುನಾವಣೆ ಡಿ.29ರಂದು ನಡೆಯಲಿದ್ದು, ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವ ನಮ್ಮನ್ನು ಗೆಲ್ಲಿಸಬೇಕು ಎಂದು ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿರುವ ಎಂ.ವಿಜಯ್, ಎಸ್.ಟಿ. ಮೀಸಲು ಸ್ಥಾನದಿಂದ ಸ್ಪರ್ಧಿಸಿರುವ ಲೋಕೇಶ್ ಬಿ., ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಲೋಕೇಶ್ ಬಿ. ಮಾತನಾಡಿ, ಸಿಟಿ ಕೋ ಆಪರೇಟಿವ್ ಬ್ಯಾಂಕ್‍ಗೆ ತನ್ನದೇ ಆದ ಇತಿಹಾಸವಿದೆ. ಹಲವು ಹಿರಿಯರು ಶತಮಾನಗಳ ಕಾಲ ಈ ಬ್ಯಾಂಕ್‍ನ್ನು ಸದೃಢ ಗೊಳಿಸಿದ್ದಾರೆ. ಹಿರಿಯರ ಮಾರ್ಗದರ್ಶನ ದಲ್ಲಿ ಕಿರಿಯರಿಗೂ ಸೇವೆ ಸಲ್ಲಿಸಲು ಅವಕಾಶ ಕೊಡಬೇಕು. ಎಂಬ ನಿಟ್ಟಿನಲ್ಲಿ ನಾವು ಸ್ಪರ್ಧಿಸಿದ್ದೆವೆ. ಹಳೆ ಬೇರು ಹೊಸ ಚಿಗುರು ಎಂಬಂತೆ ಯುವಕರು ಹಾಗೂ ಹಿರಿಯರು ಎಲ್ಲರೂ ಒಗ್ಗೂಡಿದಾಗ ಬ್ಯಾಂಕ್‍ನ್ನು ಮತ್ತಷ್ಟು ಸದೃಢಗೊಳಿಸಬಹುದಾಗಿದೆ. ಹಾಗಾಗಿ ನಮ್ಮಿಬ್ಬರನ್ನು ಕೂಡ ಚುನಾವಣೆಯಲ್ಲಿ ಗೆಲ್ಲಿಸಿ ಅವಕಾಶ ಕಲ್ಪಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
ಸಿಟಿ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ 4378 ಮತಗಳಿದ್ದು, 15 ಸ್ಥಾನಗಳಿಗೆ 32 ಸ್ಪರ್ಧಿಗಳಿದ್ದೇವೆ. ಎಸ್.ಟಿ.ಮೀಸಲು ಕ್ಷೇತ್ರದಿಂದ 4 ಜನರಿದ್ದೇವೆ. ನನ್ನ ಗುರುತು ಟಿ.ವಿ.ಯಾಗಿದ್ದು, ಕ್ರಮ ಸಂಖ್ಯೆ 21 ಆಗಿದೆ. ವಿಜಯ್ ಎಂ.ರ ಕ್ರಮಸಂಖ್ಯೆ 14 ಆಗಿದ್ದು, ಗುರುತು ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ
ಗಾಜಿನ ಲೋಟವಾಗಿದೆ. ದಯಮಾಡಿ ಯುವಕರಾದ ನಮ್ಮಿಬ್ಬರನ್ನು ಗೆಲ್ಲಿಸಿ ಹಿರಿಯರೊಂದಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು. ಬ್ಯಾಂಕ್‍ನ್ನು ಮತ್ತಷ್ಟು ಸದೃಢಗೊಳಿಸಲು ನಾವು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ವಿಜಯ್ ಎಂ., ಮಾತನಾಡಿ, ನಾವು ಈಗಾಗಲೇ ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಬಂದಿದ್ದೇವೆ. ಸೇವೆಯನ್ನೆ ಮುಖ್ಯ ಗುರಿಯನ್ನಾಗಿ ಇಟ್ಟುಕೊಂಡಿದ್ದೇವೆ. ನಾವು ಗೆದ್ದರೆ ಬ್ಯಾಂಕ್‍ನ ಡಿಜಟಲೀಕರಣ ಜೊತೆಗೆ ಶೇರುದಾರರ ಸಂಖ್ಯೆ ಹೆಚ್ಚಳ ಮತ್ತು ಬ್ಯಾಂಕ್‍ನ ಶೇರುದಾರರಿಗೆ ಕೊಡುವ ಸಾಲದ ಮಿತಿ ಹೆಚ್ಚಳ, ಹಾಗೂ ಶೇರುದಾರರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸುತ್ತೇವೆ. ಆಗಾಗಿ ನಮ್ಮಿಬ್ಬರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.