Author: Shivamogga News

District NewsLatest News

ಶಿವಮೊಗ್ಗ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆಸಾಗರ್ ಸೇರಿದಂತೆ ಆನೆಗಳ ತಾಲೀಮು

ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮ ಅಕ್ಟೋಬರ್ 21ರಂದು ಬುಧವಾರ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ನಡೆಯಲಿದ್ದು ಮಧ್ಯಾಹ್ನ 2:30ಕ್ಕೆ ಶಿವಪ್ಪ ನಾಯಕ ಅರಮನೆಯ ಅವಣದಿಂದ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದ್ದು ಅಂಬಾರಿ ಹೋರುವ ಆನೆ ಸಾಗರ್ ಮತ್ತು ಜೊತೆಗೆ ಬರುವ ಆನೆಗಳಾದ ಬಹದ್ದೂರ್ ಮತ್ತು ಸೋಮಣ್ಣ ಆನೆ ಗಳು ಇಂದು ನಗರದ ವಾಸವಿ ಶಾಲೆಯ ಆವಣದಿಂದ ಮೆರವಣಿಗೆ ಹೊರಡುವ ಮಾರ್ಗದಲ್ಲಿ ಅಲ್ಲಮಪ್ರಭು ಮೈದಾನದವರೆಗೆ ತಾಲಿಮು ನಡೆಸಿದವು.

Read More
District News

ಆಹಾರ ದಸರಾ ಶೇಂಗಾ, ಕೊಬ್ಬರಿ ಖಾದ್ಯ ಸ್ಪರ್ಧೆಯಲ್ಲಿ 12 ಜೋಡಿಗಳು ಭಾಗಿ

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ದಸರಾ 2026ರ ಅಂಗವಾಗಿ ಆಹಾರ ದಸರಾ ಪ್ರಯುಕ್ತ ಶೇಂಗಾ ಮತ್ತು ಕೊಬ್ಬರಿಯನ್ನು ಉಪಯೋಗಿಸಿ ಅರ್ಧ ಗಂಟೆ ಒಳಗೆ ಮಾಡುವ ವಿವಿಧ ಖಾದ್ಯಗಳ ಸ್ಪರ್ಧೆ ನಡೆಯಿತು, ಸುಮಾರು 12 ಜೋಡಿಗಳು ವಿವಿಧ ಬಗೆಯ ಖಾದ್ಯಗಳನ್ನು ರಚಿಸಿದರು ಅಣ್ಣ ತಂಗಿ,ಅಕ್ಕ ತಮ್ಮ. ಮತ್ತು ಅಕ್ಕ ತಂಗಿ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

Read More
District NewsLatest News

ಅ. 27ರಂದು ಆಶ್ರಯ ಮನೆಗಳಿಗಾಗಿ ಪಾಲಿಕೆ ಮುತ್ತಿಗೆ,ಮನೆಗಾಗಿ ಹಣ ಪಾವತಿಸಿದ ಬಡವರಿಗೆ ಸೂರುಕಲ್ಪಿಸಲು ಆಗ್ರಹ: ಕೆ.ಎಸ್. ಈಶ್ವರಪ್ಪ

ಇಲ್ಲಿನ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ನರ‍್ಮಿಸುತ್ತಿರುವ ಮನೆಗಳನ್ನು ಶೀಘ್ರ ಪರ‍್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಿಸಿ ಅ. 27ರಂದು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.

Read More
District News

ಸೇವಾ ಕಾಯಂಗೆ ಆಗ್ರಹಿಸಿ ಅ. 16ರಿಂದ ಪಾದಯಾತ್ರೆ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸೇವಾ ಭದ್ರತೆ ಇಲ್ಲ. ಆದ್ದರಿಂದ ಕಾರ್ಯಕರ್ತರ ಸೇವೆಯನ್ನು ಕಾಯಂ ಮಾಡಬೇಕು ಎಂದು ನವ ಕರ್ನಾಟಕ ಎಂಆರ್‌ಡಬ್ಲ್ಯು/ವಿಆರ್‌ಡಬ್ಲ್ಯು/ಯುಆರ್‌ಡಬ್ಲ್ಯು ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಯಶೋಧ ಆಗ್ರಹಿಸಿದರು.

Read More
District NewsLatest News

₹1,800 ಕೋಟಿ ಬಾಕಿ ಪಾವತಿಗೆ ಗುತ್ತಿಗೆದಾರರ ಆಗ್ರಹ: ಸರ್ಕಾರಕ್ಕೆ ಗಡುವು ನೀಡಿದ ಮಲೆನಾಡು ಗುತ್ತಿಗೆದಾರರ ಸಂಘ

ಶಿವಮೊಗ್ಗ: ಜಿಲ್ಲೆಯಲ್ಲಿ 2022–23ನೇ ಸಾಲಿನಿಂದ ಸುಮಾರು ₹1,800 ಕೋಟಿ ಬಾಕಿ ಹಣ ವಿವಿಧ ಇಲಾಖೆಗಳಿಂದ ಬಿಡುಗಡೆ ಆಗಬೇಕು. ಕಾಮಗಾರಿಗಳು ನಡೆಯುತ್ತಿದ್ದು, ಬಿಲ್‌ಗಳನ್ನೂ ಸಲ್ಲಿಸಲಾಗುತ್ತಿದೆ.

Read More
District News

ಅ.16ರಂದು ಗಮಕ ದಸರಾ: ವೈ.ಎಸ್.ವಿ. ದತ್ತ ಉದ್ಘಾಟನೆ; ಮೂವರು ಕಲಾವಿದರಿಗೆ ಸನ್ಮಾನ

ಗಮಕ ವಾಚನ–ವ್ಯಾಖ್ಯಾನ, ವಿಚಾರಗೋಷ್ಠಿ, ನೃತ್ಯರೂಪಕ ಹಾಗೂ ವಿವಿಧ ಸ್ಪರ್ಧೆಗಳನ್ನೊಳಗೊಂಡ ಗಮಕ ದಸರಾ ಅ.16ರಂದು ನಗರದಲ್ಲಿ ನಡೆಯಲಿದೆ ಎಂದು ರಾಜ್ಯ ಗಮಕಕಲಾ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷರಾದ ಹೆಚ್. ಆರ್.ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದರು.

Read More
District News

ಶಿವಮೊಗ್ಗದಲ್ಲಿ ಅ.14ರಂದು ಸಿನಿ ದಸರಾ ಸಂಭ್ರಮ: 10 ಕಿರುಚಿತ್ರಗಳ ಪ್ರದರ್ಶನ, ಚಿತ್ರರಂಗದ ಸಾಧಕರಿಗೆ ಸನ್ಮಾನ

ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ, ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವ ಹಾಗೂ ರಾಜ್–ಅನಂತ್ ಗೀತೆಗಳ ಸಂಗೀತ ಸಂಭ್ರಮ. ಇವೆಲ್ಲವನ್ನೂ ಒಳಗೊಂಡ ಶಿವಮೊಗ್ಗ ಸಿನಿ ದಸರಾ ಅ.14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

Read More
District News

ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ, ಪ್ರತಿಭಟನಾಕಾರರು ವಶಕ್ಕೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ಪ್ರಾಧ್ಯಾಪಕನೋರ್ವನ ಲೈಂಗಿಕ ಕಿರುಕುಳವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಇಂದು ನಗರದ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಬಳಿಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲೀಡರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು.

Read More
District News

ಸೊರಬ: ಸೌಹಾರ್ದದ ಸಂದೇಶ ಸಾರಿದ ಸಾರ್ವಜನಿಕ ದಸರಾ ಉತ್ಸವಕ್ಕೆ 18ರ ಸಂಭ್ರಮ

ಹಿಂದೂ ಧರ್ಮದಲ್ಲಿ ಆಶ್ವಿಜ ಮಾಸಕ್ಕೆ ಪವಿತ್ರ ಸ್ಥಾನವಿದ್ದು, ದೇವಿ ಆರಾಧನೆಗೆ ಪ್ರಶಕ್ತ ಮತ್ತು ಶ್ರೇಷ್ಠಕಾಲವೆಂದು ಪರಿಗಣಿಸಲಾಗುತ್ತದೆ ಎಂದು ಶ್ರೀ ರಂಗನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ನಾರಾಯಣ ಭಟ್ ಮರಾಠೆ ಹೇಳಿದರು.

Read More
District News

ಪ್ರಹ್ಲಾದ ಜೋಶಿ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ: ಕ್ರಮಕ್ಕೆ ಬಿಜೆಪಿ ಎಸ್‌ಟಿ ಮೋರ್ಚಾ ಮನವಿ

ಹುಬ್ಬಳ್ಳಿಯಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಶಶಿಕಾಂತ್ ಗುರೂಜಿ ಅವರು ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಎಸ್‌ಟಿ ಮೋರ್ಚಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

Read More