District NewsLatest News

ಅಂಬೇಡ್ಕರ್ ಸೇನೆ ನೂತನ ಪದಾಧಿಕಾರಿಗಳ ನೇಮಕ – ಜಿಲ್ಲಾಧ್ಯಕ್ಷ ಟಿ.ಎಂ. ಮಂಜುನಾಥ್

Share Below Link

ಶಿವಮೊಗ್ಗ : ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿಯವರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂದ ಅಂಬೇಡ್ಕರ್ ಸೇನೆಯ ಶಿವಮೊಗ್ಗ ತಾಲ್ಲೂಕು ಪದಾಧಿಕಾರಿಗಳನ್ನು ಹಾಗೂ ಹೊಳೆಹೊನ್ನೂರು ಗ್ರಾಮಾಂತರ ಭಾಗದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಟಿ.ಎಂ. ಮಂಜುನಾಥ್ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಸೇನೆಯು ರಾಜ್ಯದಲ್ಲಿ 2014ರಲ್ಲಿ ಸ್ಥಾಪನೆಯಾಗಿ ಕೆಲಸ ನಿರ್ವಹಿಸುತ್ತಾ ಬರುತ್ತಿದೆ. ಇದರ ಜಿಲ್ಲಾ ಘಟಕ 2023ರಲ್ಲಿ ರಚಿತವಾಗಿ ಕಳೆದ 3ವರ್ಷಗಳಿಂದ ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕಾರ್ಯಕ್ರಮಗಳ ಜೊತೆಗೆ ನೊಂದವರ ಧ್ವನಿಯಾಗಿ ಹೋರಾಟಮಾಡಿಕೊಂಡು ಬಂದಿದೆ. ಈಗ ನಮ್ಮ ಸಂಘವು ಶಿವಮೊಗ್ಗ ತಾಲ್ಲೂಕು ಹಾಗೂ ಹೊಳೆಹೊನ್ನೂರು ಭಾಗಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾಗಿ ಮೊಹಮ್ಮದ್ ಅಜೀಜ್‌ಜುಲ್ಲಾ, ಉಪಾಧ್ಯಕ್ಷರುಗಳಾದ ಡಿ.ಎಸ್.ವೆಂಕಟೇಶ್, ಅಕ್ಬರ್, ಕಾರ್ಯದರ್ಶಿಯಾಗಿ ಮೊಹಮ್ಮದ್ ಜಮೀರ್, ಸಹಕರ‍್ಯದರ್ಶಿಯಾಗಿ ಸೈಫುಲ್ಲಾಖಾನ್ ಹಾಗೂ ಪದಾಧಿಕಾರಿಗಳಾಗಿ ತಂಗರಾಜ್, ಎಂ.ಡಿ.ಸಾದಿಕ್, ಇರ್ಷಾದ್, ನೂರುಲ್ಲಾ ನೇಮಕಗೊಂಡಿದ್ದಾರೆ.
ಹೊಳೆಹೊನ್ನೂರು ಭಾಗಕ್ಕೆ ಭಾಷಾ ಅಧ್ಯಕ್ಷರಾಗಿ ಆರ್.ಸತೀಶ್, ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *