Latest News

ಹಿಂದೂಗಳ ಮೇಲಿನ ದೌರ್ಜನ್ಯ ಖಂಡನೆ: ಬಜರಂಗದಳ ಆಕ್ರೋಶ

Share Below Link

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕರಿಂದ ಮತ್ತು ಗಾಂಜಾ ವ್ಯಸನಿಗಳಿಂದ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತಿದ್ದು, ಹಿಂದೂ ಸಮಾಜ ಬಾಂಧವರಿಗೆ ಯಾವುದೇ ಸಂಕಷ್ಟ ಬಂದರೂ ನಮ್ಮನ್ನು ಸಂಪರ್ಕಿಸಿ ಎಂದು ಜಿಲ್ಲಾಧ್ಯಕ್ಷ ವಾಸುದೇವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಗಾಂಜಾ ಮತ್ತು ಮಾದಕ ವಸ್ತುಗಳ ಸೇವನೆ, ವರ್ಗಾವಣೆ ಮತ್ತು ಮಾರಾಟ ಹೆಚ್ಚಾಗಿದ್ದು, ತಡೆಗಟ್ಟಲು ಸರ್ಕಾರ ವಿಫಲವಾಗಿದೆ. ಗಾಂಜಾ ಸೇದುತ್ತಿರುವ ಮುಸ್ಲಿಂರು ಹಿಂದೂಗಳ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುವುದು, ಕಿರುಕುಳ ಕೊಡುವುದು, ಅವಾಚ್ಯ ನಿಂದನೆ ಮಾಡುವುದು, ಹಿಂದೂಗಳು ಎಲ್ಲಿಯೂ ಸಂಚರಿಸದಂತೆ ನಿರ್ಬಂಧ ಮಾಡುವುದು ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳ ಹತ್ತಿರ ಅಶ್ಲೀಲವರ್ತನೆ ತೋರಿ ಮುಜುಗರವಾಗುವಂತೆ ವರ್ತಿಸಿ, ಭಯಪಡಿಸುವ ನೀಚಕೃತ್ಯಗಳು ಹೆಚ್ಚಾಗುತ್ತಿದ್ದು ಇಷ್ಟೊಂದು ದೌರ್ಜನ್ಯವಾದರೂ ಸಹ ಗಾಂಜಾವ್ಯಸನಿಗಳ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದ್ದು, ಸಾರ್ವಜನಿಕರು ಸರ್ಕಾರದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದರು.

ಶಿವಮೊಗ್ಗದ ಸಂಕೇತ್ ಸಾವು ಪೊಲೀಸ್ ಮೂಲಗಳು ತಿಳಿಸಿದಂತೆ ಕ್ರಿಕೇಟ್ ವಿಚಾರಕ್ಕೆ ಹತ್ಯೆಯಾಗಿದೆ ಎಂಬುದು ತಪ್ಪು ಮಾಹಿತಿಯಾಗಿದೆ. ಹಿಂದೂ ಬಾಲಕನನ್ನೇ ಹತ್ಯೆಮಾಡಲು ಪೂರ್ವನಿಯೋಜಿತ ಸಂಚು ರೂಪಿಸಿ ಮಾಡಿರುವ ಕೃತ್ಯವಾಗಿದೆ. ಸಾಗರ ತಾಲ್ಲೂಕಿನಲ್ಲೂ ಸಹ ಇದೇ ರೀತಿಯ ಘಟನೆ ಸಂಭವಿಸಿದೆ. ಅಪ್ರಾಪ್ತ ಬಾಲಕರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಗಣಪತಿ ಮೆರವಣಿಗೆಯ ಮೇಲೆ ದೇವರಿಗೆ ಎಂಜಲು ಉಗುಳಿದ ದೃಶ್ಯ ಎಲ್ಲರೂ ನೋಡಿದ್ದಾರೆ. ಶಿರಾಳಕೊಪ್ಪದಲ್ಲಿಯೂ ಸಹ ಗಾಂಜಾ ವ್ಯಸನಿ ಮುಸ್ಲಿಂ ಯುವಕರು ಹಿಂದೂ ಯುವಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಹಾಗಾಗಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಯು ಜಿಲ್ಲೆಯ ಸಮಸ್ತ ಹಿಂದೂಗಳಿಗೆ ಧೈರ್ಯತುಂಬುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಯಾವುದೇ ಮೂಲೆಯಲ್ಲೂ ಹಿಂದೂಗಳ ಮೇಲೆ ದೌರ್ಜನ್ಯವಾದರೆ ಅಥವಾ ನೋವುಂಟಾದರೆ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದರು.

ಜಿಲ್ಲೆಯನ್ನು ವ್ಯಸನಮುಕ್ತ ಜಿಲ್ಲೆಯನ್ನಾಗಿ ಮಾಡಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಗಾಂಜಾ ವ್ಯಸನಿಗಳಿಗೆ ಮತ್ತು ಮಾರಾಟಗಾರರಿಗೆ ಹಾಗೂ ತಯಾರಕರಿಗೆ ಕಠಿಣಶಿಕ್ಷೆಯಾಗುವಂತೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರಸ್ವರೂಪದ ಹೋರಾಟದ ಎಚ್ಚರಿಕೆಯನ್ನು ನೀಡಿದರು.

ಇನ್ನೋರ್ವ ಮುಖಂಡ ರಮೇಶ್‌ಬಾಬು ಮಾತನಾಡಿ, ಸರ್ಕಾರ ಬಿಗಿಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಮತ್ತು ನಗರದ ಸೂಳೆಬೈಲಿನಲ್ಲಿ ಒಂದು ಪೊಲೀಸ್ ಠಾಣೆ ತುರ್ತಾಗಿ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು. ಬಜರಂಗದಳ ಮುಖಂಡ ರಾಜೇಶ್‌ಗೌಡ ಮಾತನಾಡಿ, ಮೃತಪಟ್ಟ ಬಾಲಕ ಸಂಕೇತ್ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಸಂಕೇತ್ ಅಕ್ಕನಿಗಿಂತ ಎರಡು ವರ್ಷ ಸೀನಿಯರ್ ಆಗಿದ್ದಾರೆ. ಅವರ ವಯಸ್ಸಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ಕುಲಂಕೂಷ ತನಿಖೆಯ ಅವಶ್ಯಕತೆ ಇದೆ.

ಈ ಪ್ರಕರಣಕ್ಕಿಂತ ಮೊದಲು ಅನೇಕ ಬಾರಿ ಈ ಪ್ರಕರಣದ ಅಪ್ರಾಪ್ತ ಆರೋಪಿಗಳು ಮನೆಯ ಬಳಿ ಬಂದು ಕಿರಿಕ್ ಮಾಡಿದ್ದೂ ಇದೆ. ಶಾಲಾ ಆವರಣದಲ್ಲಿ ಗಾಂಜಾ ಸೇವನೆ ಮಾಡಿದ್ದಾಗ, ಪ್ರಶ್ನಿಸಿದ ಎರಡೂ ಕುಟುಂಬಗಳ ಮೇಲೆ ಇವರು ಟಾರ್ಗೇಟ್ ಮಾಡಿದ್ದಾರೆ. ಸ್ಥಳೀಯ ಮುಸ್ಲಿಂರು ನಡೆಸುವ ಮೆಡಿಕಲ್ ಶಾಪ್‌ನಲ್ಲಿ ಹೇರಳವಾಗಿ ಮಾದಕ ಮಾತ್ರೆಗಳು ಸಿಗುತ್ತಿವೆ. ಅಪ್ರಾಪ್ತ ಬಾಲಕರನ್ನು ಮುಂದಿಟ್ಟುಕೊಂಡು ಈ ರೀತಿಯ ಕೃತ್ಯ ನಡೆಸುವ ಟ್ರೆಂಡ್ ಮುಂದುವರೆದಿದ್ದು ಇದಕ್ಕೆ ಕಡಿವಾಣ ಹಾಕದಿದ್ದರೆ ಇದರ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕದಿದ್ದರೆ ವಿಹೆಚ್‌ಪಿ ಮತ್ತು ಬಜರಂಗದಳ ತೀವ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುರೇಶ್‌ಬಾಬು ಇದ್ದರು.

Leave a Reply

Your email address will not be published. Required fields are marked *