District NewsLatest NewsNational-International NewsOthersState News

ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಭಾರೀ ಟಗರು ಕಾಳಗ ಯಶಸ್ವಿ

Share Below Link

ಶಿವಮೊಗ್ಗ: ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಮ್ಮೂರ ಬಳಗ ಶಿವಮೊಗ್ಗದಿಂದ ನಗರದ ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಭಾರೀ ಟಗರು ಕಾಳಗ ಯಶಸ್ವಿಯಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.

ಬೆಳಿಗ್ಗೆಯಿಂದಲೇ ರಾಜ್ಯ ಮತ್ತು ಹೊರರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ಟಗರು ಕಾಳಗಕ್ಕೆ ಅಪಾರ ಅಭಿಮಾನಿಗಳು ಆಗಮಿಸ ತೊಡಗಿದ್ದರು. ಮತ್ತು ಕಾಳಗಕ್ಕಾಗಿಯೇ ಸಿದ್ಧಪಡಿಸಿದ್ದ ತಮ್ಮ ಜಿದ್ದಿನ ಟಗರುಗಳೊಂದಿಗೆ ಆಗಮಿಸಿದ್ದರು. ಬೆಳಿಗ್ಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ, ಸಿ.ಎಸ್. ಷಡಾಕ್ಷರಿ, ಎಂ. ಶ್ರೀಕಾಂತ್, ಆರ್.ಪ್ರಸನ್ನಕುಮಾರ್, ಹೆಚ್.ಎಸ್. ಸುಂದರೇಶ್, ಎಸ್.ಕೆ. ಮರಿಯಪ್ಪ, ಹೆಚ್.ಸಿ. ಯೋಗೀಶ್ ಸೇರಿದಂತೆ ಹಲವು ಗಣ್ಯರು ಟಗರು ಕಾಳಗಕ್ಕೆ ಚಾಲನೆ ನೀಡಿದರು.

ಈ ಬಾರಿ ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಈ ಕಾರ್ಯಕ್ರಮಕ್ಕೆ ಮಹಿಳೆಯರಿಗಾಗಿಯೇ ಗುಲಾಬಿ ಬಣ್ಣದ ವೇದಿಕೆಯನ್ನು ನಿರ್ಮಿಸಲಾಗಿತ್ತು. ಬೆಳಿಗ್ಗೆಯಿಂದಲೇ ಪಂದ್ಯ ಮುಗಿಯುವವರೆಗೆ ದಾಸೋಹ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿತ್ತು. ಸಹಾಯಾರ್ಥವಾಗಿ 100 ರೂ.ಗಳ ಲಕ್ಕಿಡಿಪ್ಪನ್ನು ಮಾರಾಟಮಾಡಲಾಗಿತ್ತು. ಸಂಜೆ ಸಂಸದ ಬಿ.ವೈ. ರಾಘವೇಂದ್ರ ವಿಶೇಷ ವೇದಿಕೆಯಲ್ಲಿ ಲಕ್ಕಿಡಿಪ್ ಡ್ರಾ ಕಾರ್ಯಕ್ರಮ ನಡೆಸಿದರು. ಮೊದಲ ಬಹುಮಾನ 30 ಕೆ.ಜಿ. ತೂಕದ ಟಗರು ಸಂಡೂರಿನಿAದ ಆಗಮಿಸಿದವರ ಪಾಲಾಯಿತು.

2ನೇ ಬಹುಮಾನ ಪತ್ರಕರ್ತರ ಆರುಂಡಿ ಶ್ರೀನಿವಾಸಮೂರ್ತಿಯವರಿಗೆ 30 ಕೆ.ಜಿ.ಯ ಟಗರು ಹಾಗೂ ಮೂರನೇ ಬಹುಮಾನ ಏಕಾಂಕ್ಷ ಎನ್ನುವವರಿಗೆ 30 ಕೆ.ಜಿ.ಯ ಟಗರು ದೊರೆಯಿತು.

8 ಹಲ್ಲಿನ ಮರಿ ವಿಭಾಗದಲ್ಲಿ ಗೆದ್ದ ಟಗರಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಟ್ರೋಫಿ ಹಾಗೂ 1,01,001 ನಗದು ಹಾಗೂ ಟ್ರೋಫಿ, 6 ಹಲ್ಲಿನ ಮರಿಗೆ ವೀರಶಿವಪ್ಪನಾಯಕ ಟ್ರೋಫಿ ಹಾಗೂ 66,666 ರೂ. ನಗರು, 4ಹಲ್ಲಿನ ಮರಿಗೆ ಶ್ರೀ ಭಗೀರಥ ಟ್ರೋಫಿ ಮತ್ತು 44,444 ನಗರು, 2ಹಲ್ಲಿನ ಮರಿಗೆ ವೀರಸಿಂಧೂರ ಲಕ್ಷö್ಮಣ ಟ್ರೋಫಿ, 22,222 ನಗದು ದೊರೆಯಿತು.

ಎಲ್ಲಾ ವಿಭಾಗಗಳಲ್ಲೂ ಕೂಡ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಯಿತು. ಶಾಸಕರಾದ ಧನಂಜಯ ಸರ್ಜಿ, ಸುಹಾಸ್ ರಾಘವೇಂದ್ರ, ಭಗತ್ ರಾಘವೇಂದ್ರ, ಲಕ್ಕಿಡ್ರಿಪ್ ಡ್ರಾ ಸಂದರ್ಭದಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಕೆ.ರಂಗನಾಥ್, ಮಾಲತೇಶ್, ನಾಗರಾಜ್ ಕಂಕಾರಿ, ಪಾಲಾಕ್ಷಿ, ಐಡಿಯಲ್ ಗೋಪಿ, ಗಿರೀಶ್, ಸತೀಶ್, ದೀಪು, ಅಭಿಷೇಕ, ಸುನೀಲ್, ವೀರೇಶ್, ಪವನ್, ಕಿರಣ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *